ಅಘೋರೇಶ್ವರ

 ಪರಮೇಶ್ವರನ ಪಂಚಮುಖಗಳಲ್ಲಿ (ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ, ಈಶಾನ) ಒಂದರ ಹೆಸರು. ಕೆಳದಿಯಲ್ಲಿ ರಾಜ್ಯಭಾರ ಮಾಡುತ್ತಿದ್ದ ದೊಡ್ಡ ಸಂಕಣ್ಣನಾಯಕ (1540-1559) ಅಘೋರೇಶ್ವರನ ಹೆಸರಿನಲ್ಲಿ ಒಂದು ದೊಡ್ಡ ದೇವಾಲಯವನ್ನು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕು ಇಕ್ಕೇರಿಯಲ್ಲಿ ಕಟ್ಟಿಸಿರುತ್ತಾನೆ. ಮಲೆನಾಡಿನ ಜನ ಈ ದೇವರ ಬಗ್ಗೆ ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತದೆ. ಶಿಲ್ಪಕಲಾ ದೃಷ್ಟಿಯಿಂದಲೂ ದೇವಾಲಯ ಭವ್ಯವಾಗಿದೆ.

 

(ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ